Posts

Image
  ನನ್ನ ಮರ  ಬುಲ್ ಬುಲ್ ಹಕ್ಕಿಯ ಕೊಕ್ಕಿ ನಿಂದ ಜಾರಿ ಬಿದ್ದ ಬೀಜವೊಂದು ಮುಂಗಾರಿನ ಮಳೆಗೆ ಚಿಗುರೊಡೆದು ಗಿಡವಾಗಿ ,ಮರವಾಗಿ ನೆರಳು ನೀಡಿತು , ಹೊವು ನೀಡಿತು ಕಾಯಿ-ಹಣ್ಣು ನೀಡಿತು , ಉಸಿರು ನೀಡಿತು , ಹಸಿರು ನೀಡಿತು ಹಕ್ಕಿಗಳು ಮನೆಮಾಡಿತು ಪ್ರಾಣಿಗಳಿಗೆ ಮಡಿಲಾಯಿತು ಮಕ್ಕಳು, ಮಂಗ ಮರಿಗಳು ಉಲ್ಲಾಸದಿ ಜೋಲಾಡಿತು ಹಚ್ಚ ಹಸಿರಿನಲ್ಲಿ ಪ್ರಕೃತಿ ತೇಲಾಡಿತು ಆನಂದದಿ ಕುಣಿದಾಡಿತು ಸ್ವಾರ್ಥ ಬಿಟ್ಟು ಬೇರು ಹರಡಿ ಗೆಲ್ಲುಗಳಿಂದ ಆಗಸಕ್ಕೆ ಏರಿ ಸಂಭ್ರಮಿಸಿತು ಬಿಸಿಲ ತಡೆದು ನೆರಳ ನೀಡಿತು ದಣಿದು ನೆರಳ ಪಡೆದ ಕಬ್ಬಿಣದ ಕೊಡಲಿಯೊಂದು ಬುಡಕ್ಕೆ ಬಡಿದು ನನ್ನ ಮರವ ಬೀಳಿಸಿತು ಉದರ ಸೀಳಿ ಸ್ವಾರ್ಥ ಬದುಕನ್ನು ಅಲಂಕರಿಸಿತು ಬೂಮಿ ಒಡಲ ಬರಿದಾಗಿಸಿತು ಬರಗಾಲವಾಯಿತು   ಅಶೀರುದ್ದೀನ್ ಅಲಿಯಾ, ಮಂಜನಾಡಿ